ಎಲ್ಲಾ ಮಹಿಮೆಗೂ ಘನತೆಗೂ – Ella mahimegu ganathegu song lyrics

Tamil Christian song lyrics in Tamil script and English letters (Tanglish).

ಎಲ್ಲಾ ಮಹಿಮೆಗೂ ಘನತೆಗೂ ಯೋಗ್ಯನು ನೀನೇ
ನಿನ್ನ ಮನ ತುಂಬಿ ಆರಾಧಿಸುವೆ
ಎಲ್ಲಾ ಸ್ತೋತ್ರಕ್ಕೂ ಗೌರವಕ್ಕೂ ಪಾತ್ರನು ನೀನೇ ಆರಾಧಿಸುವೆನು ನಿನ್ನ ಯೇಸುವೇ
ನಿನ್ನ ಮೇಲೆತ್ತಿ ಆರಾಧಿಸುವೆ -2
ಆರಾಧಿಸುವೆನು ನಿನ್ನ ಯೇಸುವೇ
ಆರಾಧಿಸುವೆನು ನಿನ್ನ -2
1. ಆ ಘೋರ ಶಿಲುಬೆಯಲ್ಲಿ ನನಗಾಗಿ ಜಡಿಯಲ್ಪಟ್ಟೆ
ನನಗಾಗಿ ಜಜ್ಜಲ್ಪಟ್ಟು ನಿನ್ ಪ್ರಾಣ ನೀಡಿದೆ ಎಷ್ಟೊಂದು ಮಮತೆಯನ್ನು ನನ್ನ ಮೇಲೆ ತೋರಿದ
ದಿನವೆಲ್ಲಾ ನಿನ್ನಯ ಪ್ರೀತಿಯ ಹೊಗಳುವೇ -2 ಆರಾಧಿಸುವೆನು ನಿನ್ನ…
2. ಯೆಹೋವಾ ಯೀರೆಯಾಗಿ ಅಗತ್ಯವೆಲ್ಲ ತೀರಿಸಿದೆ
ಯೆಹೋವ ನಿಸ್ಪಿಯಾಗಿ ಜಯವನ್ನು ನೀಡಿದೆ -2 ಯೆಹೋವಾ ಶಮ್ಮಾ ನೀನೇ ಜೊತೆಯಲ್ಲಿ ನಡೆಯುವೆ
ಯೆಹೋವಾ ರಾಫಾ, ನೀನೇ ಆರೋಗ್ಯದಾಯಕನೇ -2