ಕೈ ಬಿಡದ ದೇವರೇ – Kaibidada Devarae Lyrics

Tamil Christian song lyrics in Tamil script and English letters (Tanglish).

ನನ್ನನೆಂದು ಕೈ ಬಿಡದ ದೇವರೇ ನಿನ್ನನ್ನೇ ಆರಾಧಿಸುವೆ
ಒಂದು ಕ್ಷಣವೂ ತೊರೆಯದ ನನ್ನೆಸುವೆ ನಿನ್ನನ್ನೇ ಪ್ರೀತಿಸುವೆ ||2||
ನನ್ ಬಲವು ನೀನೆ ನನ್ ಜಯವು ನೀನೆ
ನನ್ ಧೈರ್ಯ ನೀನೇ ಯೇಸಯ್ಯ
ಆಗ್ನಿಯ ದುರ್ಗ ನೀನೇ ಮುನ್ನಡೆಸುವ ಸೈನ್ಯ ನೀನೇ
ನನ್ ರಕ್ಷಕನು ನೀನೆ ಯೇಸಯ್ಯ ||2||
1. ಒಂದೊಂದು ದಿನವೂ ನನ್ನ ಮರೆಯದೆ ಪೋಷಿಸಿರುವೆ
ಎಲ್ಲಾ ಕೇಡಿಗೂ ನನ್ನ ತಪ್ಪಿಸಿ ಕಾದಿರುವೆ ||2||
ಬರಿದಾಗಿ ಬಂದ ನನ್ನ ಶ್ರೀಮಂತನ ಮಾಡಿರುವೆ
ಎಷ್ಟೊಂದು ಉಪಕಾರ ನನಗಾಗಿ ಮಾಡಿರುವೆ
ಜೀವ ಕಾಲವೆಲ್ಲ ನಿನ್ನನ್ನೇ ಸ್ತುತಿಸುವೆ
ಈ ಉಸಿರು ನಿಲ್ಲುವವರೆಗೂ ನಿನಗಾಗಿ ಬಾಳುವೆ
ನನ್ ಬಲವು ನೀನೆ ||2||
2. ಬಲವು ಕುಂದಿದಾಗ ಸಹಾಯವು ಇಲ್ಲದಾಗ
ಕತ್ತಲೆ ಕಣಿವೆಯಲ್ಲೂ ನನ್ನ ನಂಬಿಕೆ ನೀನೆ ||2||
ಕಷ್ಟದಿ ಬಿಡಿಸುವೆ ದೊಡ್ಡ ಕಾರ್ಯವ ಮಾಡುವೆ
ನನ್ನ ನೋವನ್ನೆಲ್ಲ ಮುಂದೆ ದೊಡ್ಡ ಸಾಕ್ಷಿಯಾಗಿಸುವೆ ||2|
ನನ್ ಬಲವು ನೀನೆ ||2||
3. ನಾ ಕಂಡ ಕನಸುಗಳೆಲ್ಲ ನಡೆಯಲ್ಲ ಎಂದು ಕಂಡರು
ಅದ್ಭುತ ನಡೆಯು ಸಾಧ್ಯತೆ ಇಲ್ಲದೆ ಹೋದರು
ಇಲ್ಲದ್ದನ್ನು ಇರೋದಾಗಿ ಕರೆಯುವ ಕರ್ತನೆ
ಸತ್ತದ್ದಕ್ಕೆ ಜೀವವನ್ನು ಕೊಡುವ ದೇವರೇ ನೀ
ನುಡಿದ ಮಾತು ಎಂದಿಗೂ ವ್ಯರ್ಥವಾಗಿ ಬೀಳದು
ಆದ ತಡೆಯೋ ಶಕ್ತಿ ಯಾವುದು ನಮ್ಮೆದುರು ನಿಲ್ಲಲು
ನನ್ ಬಲವು ನೀನೆ ||2||