ನನ್ ತಂದೆಯ ರಾಜ್ಯದಲ್ಲಿ – Nan Tandheya Rajyadalli Lyrics

Tamil Christian song lyrics in Tamil script and English letters (Tanglish).

ನನ್ ತಂದೆಯ ಸನ್ನಿಧಿಯಲ್ಲಿ ನಾ ಆರಾಧಿಸುವೆ
ನನ್‌ ತಂದೆಯ ಸನ್ನಿಧಿಯಲ್ಲಿ ನಾ ಸ್ತುತಿಸುವೆ
ನನ್‌ ತಂದೆಯ ಸನ್ನಿಧಿಯಲ್ಲಿ ನಾ ಕೊಂಡಾಡುವೆ
ನನ್‌ ತಂದೆಯ ಸನ್ನಿಧಿಯಲ್ಲಿ ನಾ ಹಾಡುವೆ
ನನ್ ತಂದೆಯ ರಾಜ್ಯದಲ್ಲಿ ಕಣ್ಣೀರಿಲ್ಲ
ನನ್ ತಂದೆ ರಾಜ್ಯದಲ್ಲಿ ಕಷ್ಟವಿಲ್ಲ
ನನ್ ತಂದೆಯ ರಾಜ್ಯದಲ್ಲಿ ದುಃಖವಿಲ್ಲ
ನನ್ ತಂದೆ ರಾಜ್ಯದಲ್ಲಿ ರೋಗವಿಲ್ಲ
ಅಲ್ಲಿ ಎಂದೆಂದೂ ಸಂತೋಷವೇ ಆತನನ್ನೇ ನಾ ಆರಾಧಿಸುವೆನು
ಅಲ್ಲಿ ಎಂದೆಂದೂ ಸಂತೋಷವೇ ಆತನನ್ನೇ ನಾ ಸ್ತುತಿಸುವೆನು
ತುತ್ತೂರಿ ಶಬ್ದ ಕೇಳುವಾಗ
ರೂಪಾಂತರ ಹೊಂದುವೆನು – 2
ಆತನೊಂದಿಗೆ ಎಂದೆಂದಿಗೂ ಇರಲು
ನಮ್ಮನ್ನು ಕರೆದೊಯ್ಯುವ
ಯೇಸುವಿನ್ ಸನ್ನಿಧಿಯಲ್ಲಿ
ಹಲ್ಲೆಲೂಯ ಹಾಡುವೆ – 2
ನನ್ ತಂದೆಯ ರಾಜ್ಯದಲ್ಲಿ ಭಯವಿಲ್ಲ
ನನ್ ತಂದೆ ರಾಜ್ಯದಲ್ಲಿ ವೇದನೆ ಇಲ್ಲ
ನನ್ ತಂದೆಯ ರಾಜ್ಯದಲ್ಲಿ ಇರುಳಿಲ್ಲ
ನನ್ ತಂದೆ ರಾಜ್ಯದಲ್ಲಿ ಮರಣವಿಲ್ಲ
ಅಲ್ಲಿ ಎಂದೆಂದೂ ಸಂತೋಷವೇ ಆತನನ್ನೇ ನಾ ಆರಾಧಿಸುವೆನು
ಅಲ್ಲಿ ಎಂದೆಂದೂ ಸಂತೋಷವೇ ಆತನನ್ನೇ ನಾ ಸ್ತುತಿಸುವೆನು
ಅಲ್ಲಿ ಎಂದೆಂದೂ ಸಂತೋಷವೇ ಆತನನ್ನೇ ನಾ ಕೊಂಡಾಡುವೆನು
ಅಲ್ಲಿ ಎಂದೆಂದೂ ಸಂತೋಷವೇ
ಹೊಸ ಹಾಡನ್ನು ನಾ ಹಾಡುವೆನು
ಅಲ್ಲಿ ಎಂದೆಂದೂ ಸಂತೋಷವೇ
ಹಲ್ಲೇಲೂಯ ನಾ ಹಾಡುವೆನು