ನನ್ನ ಕಾಣ್ವವನೇ – Nanna Kaanvavane Song Lyrics

Tamil Christian song lyrics in Tamil script and English letters (Tanglish), from the Jebathotta Jeyageethangal collection.

ನನ್ನ ಕಾಣ್ವವನೇ
ದಿನವೂ ಕಾಯ್ವವನೇ
ಪರಿಕ್ಷಿಸಿ ತಿಳಿದಿರುವೇ
ಸುತ್ತಲು ಆವರಿಸಿರುವೆ
ಕುಳಿತುಕೊಳ್ವದು ಎದ್ದೇಳ್ವದು
ಚೆನ್ನಾಗಿ ಅರಿತಿರುವೆ
ನನ್ನಾಸೆ ಬಯಕೆಗಳೆಲ್ಲಾ
ಸಂಪೂರ್ಣ ಅರಿತಿರುವೆ
ನಡೆಯೊದನ್ನು ನಾ ಮಲಗೋದನ್ನು
ಅಪ್ಪಾ ನೀ ಅರಿತಿರುವೆ
ಸ್ತೋತ್ರ ರಾಜಾ ಯೇಸು ರಾಜಾ (2)
ಹಿಂದೆ ಮುಂದೆ ನನ್ನನ್ನಾವರಿಸಿ
ನನ್ನ ಸುತ್ತುವರಿದಿರುವೆ
ನಿನ್ ಹಸ್ತದಿಂದ ದಿನವು ನನ್ನ
ಬಿಗಿಯಾಗಿ ಹಿಡಿದಿರುವೆ
ಗರ್ಭದಲ್ಲೆ ನನ್ನನ್ನು ಕಂಡು
ನನ್ ರಚನೆಯ ಗಮನಿಸಿದೆ
ಅದ್ಭುತವಾಗಿ, ವಿಚಿತ್ರವಾಗಿ
ನನ್ನನ್ನು ರೂಪಿಸಿದೆ